Skip to main content

ಹಿಂದುಳಿದ ಕುಟುಂಬಗಳಿಂದ ಬಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ , ಅವರ ಕನಸನ್ನು ನನಸು ಮಾಡಿಕೊಂಡು , ಜೀವನದಲ್ಲಿ ಏನನ್ನಾದರೂ ಸಾಧಿಸಲು ಉತ್ತಮ ಶಿಕ್ಷಣ ನೀಡಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಗಿದೆ.

ಈವರೆಗಿನ ಹೆಜ್ಜೆಗಳು...

“ನಮ್ಮೆಲ್ಲರ ಜೊತೆಗೂ ನಮ್ಮವರು ಅನ್ನಬಹುದಾದ ಯಾರಾದರೊಬ್ಬರು ಇದ್ದೇ ಇರುತ್ತಾರೆ. ಹಾಗೆ ಯಾರೂ ಇಲ್ಲದವರ ಪಾಲಿಗೆ ‘ಶಕ್ತಿಧಾಮ’ ಇರುತ್ತದೆ.” ಈ ಭರವಸೆಯ ಕಂದೀಲು ಹಿಡಿದು, ಶಕ್ತಿಧಾಮ ಸುಮಾರು 25 ವರ್ಷಗಳಿಗೂ ಹಿಂದಿನಿಂದ ನಡೆಯುತ್ತ ಬಂದಿದೆ. ಸಣ್ಣ ಸಂಖ್ಯೆಯ ಸೌಲಭ್ಯವಂಚಿತರಿಗೆ ಆಶ್ರಯ ನೀಡುವುದರೊಂದಿಗೆ ಆರಂಭಗೊಂಡ ಶಕ್ತಿಧಾಮ; 4,000ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ನೆಲೆ ಒದಗಿಸಿದ, ಅವರ ಕನಸುಗಳನ್ನು ಪೋಷಿಸಿದ, ಅವರ ಸಾಧನೆಗೆ ಸಹಕಾರ ನೀಡಿದ ಸಾರ್ಥಕ ಭಾವ ಅನುಭವಿಸುತ್ತಿದೆ. "

ಪ್ರಸ್ತುತ ನಮ್ಮ ಸಂಸ್ಥೆಯ ವತಿಯಿಂದ ಆಶ್ರಮ ಶಾಲೆ ಆರಂಭವಾಗುತ್ತಿದ್ದು; ನಮ್ಮ ಮಕ್ಕಳು ಒಂದೇ ಸೂರಿನಡಿಯಲ್ಲಿ ಕಲಿಕೆ ನಡೆಸಲಿದ್ದಾರೆ. ಅಡುಗೆ ಸೌಲಭ್ಯ, ಕಂಪ್ಯೂಟರ್ ತರಬೇತಿ, ಹೊಲಿಗೆ ತರಬೇತಿ, ಜೇನು ಸಂಗ್ರಹಣೆ, ಯೋಗ ತರಬೇತಿಯೇ ಮೊದಲಾದ ಭವಿಷ್ಯದ ಬದುಕಿಗೆ ಅಡಿಪಾಯವಾಗಬಲ್ಲ ವಿಷಯಗಳನ್ನು ಮಕ್ಕಳು ಅಭ್ಯಾಸ ಮಾಡಲಿದ್ದಾರೆ.

25+

ವರ್ಷಗಳ ಸೇವೆ

4000+

ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ

ನಮ್ಮ ಕುರಿತು 

ನಮ್ಮ ಕುರಿತು 

ನಮ್ಮ ಕುರಿತು 

ನಮ್ಮ ಕುರಿತು 

ನಮ್ಮ ಕುರಿತು 

“ಎಂದಿಗೂ ಮಕ್ಕಳಿಗೆ ಏನನ್ನ ಯೋಚನೆ ಮಾಡ್ಬೇಕು ಅನ್ನೋದಕ್ಕಿಂತ ಹೇಗೆ ಯೋಚಿಸಬೇಕು ಅನ್ನೋದನ್ನ ಕಲಿಸಬೇಕು .. ಈ ನಿಟ್ಟಿನಲ್ಲಿ ಶಕ್ತಿಧಾಮ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ನೀಡಿ ಅವರ ಸುಂದರವಾದ ಪುಟ್ಟ ಪ್ರಪಂಚ ಕಟ್ಟಿಕೊಳ್ಳಲು ನೆರವಾಗುತ್ತಿದೆ. “

ಶಕ್ತಿಧಾಮ ಮಹಿಳಾ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವು 1997 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದು ಕರ್ನಾಟಕದ ಮೈಸೂರಿನಲ್ಲಿ ನೆಲೆಗೊಂಡಿದೆ ಮತ್ತು 4000 ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಿಸಿದೆ ಮತ್ತು ಪುನರ್ವಸತಿಯನ್ನು ಕಲ್ಪಿಸಿಕೊಟ್ಟಿದೆ.

ಅವರಲ್ಲಿ ಹೆಚ್ಚಿನವರು ಈಗ ಗೌರವಯುತ ಜೀವನ ನಡೆಸುತ್ತಿದ್ದಾರೆ.

ಯೋಜನೆಯ ಮುಂದುವರಿಕೆಯಾಗಿ, ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುವಂತೆ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುವ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಮಹಿಳೆಯರನ್ನು ಅವರು ಅನುಭವಿಸಿರಬಹುದಾದ ಆಘಾತದಿಂದ ಹೊರತರಲು ಕೇಂದ್ರದ ಎರಡು ಕೌನ್ಸೆಲಿಂಗ್ ಘಟಕಗಳ ಮೂಲಕ ಆಪ್ತಸಮಾಲೋಚನೆ ನಡೆಸಲಾಗುತ್ತದೆ.

ಶಕ್ತಿಧಾಮದ ಪರಿಚಯದ ವಿಡಿಯೋ.

3:07 ಅವಧಿ

ಶಕ್ತಿಧಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ.

2:27 ಅವಧಿ

ಸಹಾಯ ಹಸ್ತ

ವಸತಿ

ಅವಿವಾಹಿತ ತಾಯಂದಿರು, ಅತ್ಯಾಚಾರ ಸಂತ್ರಸ್ತರು ಅಥವಾ ಗರ್ಭಿಣಿಯರು ಶಕ್ತಿಧಾಮದ ಬಾಗಿಲು ಬಡಿದ ಕ್ಷಣದಿಂದಲೇ ನಮ್ಮ ಆಸರೆ ಪಡೆಯುತ್ತಾರೆ.

ಆಪ್ತ ಸಮಾಲೋಚನೆ

ಅಗತ್ಯದಲ್ಲಿರುವ ಮಹಿಳೆಯರಿಗೆ ಆದ್ಯತೆಯ ಮೇರೆಗೆ ಸೂಕ್ತ ಸಮಾಲೋಚನೆ ಹಾಗೂ ಬೆಂಬಲ ಒದಗಿಸಲಾಗುತ್ತದೆ.

ವೈದ್ಯಕೀಯ ಬೆಂಬಲ

ಪ್ರಸವದ ನಂತರ ಬಾಣಂತನ, ಶಿಶು ಆರೈಕೆ, ಮಗುವಿಗೆ 3ರಿಂದ 6 ವರ್ಷಗಳಾಗುವವರೆಗೂ ವಸತಿ ಸೌಕರ್ಯ ಒದಗಿಸುವ ಜೊತೆಗೆ, ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತದೆ.

ಶಿಕ್ಷಣ

ಹಿಂದುಳಿದ ಕುಟುಂಬಗಳಿಂದ ಬಂದ ಹೆಣ್ಣುಮಕ್ಕಳಿಗೆ ವಸತಿ ಶಿಕ್ಷಣದ ಅವಕಾಶ ಒದಗಿಸಲಾಗುತ್ತದೆ.

ಕಾನೂನು ಬೆಂಬಲ

ಅಗತ್ಯದಲ್ಲಿರುವ ಮಹಿಳೆಯರಿಗೆ ಕಾನೂನು ಬೆಂಬಲ ಒದಗಿಸುವ ಮೂಲಕ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಸಹಾಯ ಮಾಡಲಾಗುತ್ತದೆ.

ಕೌಶಲ್ಯಾಭಿವೃದ್ಧಿ

ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಮಹಿಳೆಯರಿಗೆ ಅನುವು ಮಾಡಿಕೊಡಲಾಗುತ್ತದೆ.

ನಮ್ಮ ಉದ್ದೇಶವನ್ನು ಬೆಂಬಲಿಸಿ