Skip to main content

ಫಾರೆವರ್ ಏಂಜಲ್ಸ್

ಫಾರೆವರ್ ಏಂಜಲ್ಸ್, ಗೀತಾ ಶಿವರಾಜ್ ಕುಮಾರ್ ಅವರ ಕಲ್ಪನೆಯ ಕೂಸು. ಶಕ್ತಿಧಾಮದ ಹೆಣ್ಣುಮಕ್ಕಳ ಪಾಕ ಕಲೆಯ ಒಲವನ್ನು ಪೋಷಿಸಲೆಂದೇ ಇದನ್ನು ರೂಪಿಸಲಾಗಿದೆ. ಈ ಯೋಜನೆಯ ಮೂಲಕ ಅವರಲ್ಲಿ ಕಲಿಕೆ, ಗುಣಮಟ್ಟ ಮತ್ತು ಉದ್ಯಮಶೀಲತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ವೈರಸ್ ಸೋಂಕಿನ ಭಯದಲ್ಲಿ ಜಗತ್ತು ಲಾಕ್ ಡೌನ್ ಮಾಡಿಕೊಂಡು ಕುಳಿತಿದ್ದಾಗ ಗೀತಾ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಒಂದಷ್ಟು ಹೆಣ್ಣುಮಕ್ಕಳು ಕೊನೆಗಾಲದಲ್ಲಿದ್ದ ಬೇಕರಿಯನ್ನು ಉಳಿಸಲು ತಮ್ಮದೇ ಒಂದು ‘ಸಿಹಿ’ಯಾದ ದಾರಿ ಹಿಡಿದಿದ್ದರು. ಗೀತಾ ಅವರು ಶಕ್ತಿಧಾಮದಲ್ಲಿ ಸ್ಥಾಪಿಸಲಾಗಿದ್ದ ಆಧುನಿಕ ಅಡುಗೆ ತಯಾರಿಕೆ ಪರಿಕರಗಳನ್ನು ಬಳಸಿಕೊಂಡು 16 ಹೆಣ್ಣುಮಕ್ಕಳಿಗೆ ಪಾಕ ತರಗತಿಗಳನ್ನು ಆರಂಭಿಸಿದರು. ಕೆಲವೇ ಸಿಹಿತಿಂಡಿಗಳ ತಯಾರಿಕೆಯೊಡನೆ ಆರಂಭವಾದ ಈ ಯೋಜನೆ, ಇಂದು ಈ ಹೆಣ್ಣುಮಕ್ಕಳು 250 ಜನರ ಭೋಜನ ಕೂಟ ನಿರ್ವಹಿಸಲು ಶಕ್ತರಾಗುವ ಮಟ್ಟಕ್ಕೆ ಪರಿಣಾಮಕಾರಿಯಾಗಿದೆ. ಶಕ್ತಿಧಾಮದ ತರಬೇತಿ ಪಡೆದ ಹೆಣ್ಣುಮಕ್ಕಳು ಇಂದು ಜಗತ್ತಿನ ವಿವಿಧೆಡೆಯ ಬಗೆಬಗೆಯ ಖಾದ್ಯಗಳನ್ನು ತಯಾರಿಸಲು ಶಕ್ತರಾಗಿದ್ದಾರೆ. ಪೇಸ್ಟ್ರಿಯಿಂದ ಹಿಡಿದು ಯುರೋಪಿಯನ್ ತಿನಿಸು ಬಾಪ್ಕಾವರೆಗೆ; ಪೇಜೆಲ್, ಫ್ರೆಂಚ್ ತಿನಿಸುಗಳು, ಸಿನಾಮನ್ ರೋಲ್, ಕ್ರೀಮ್ ಬ್ರೂಲಿಸ್ ಮೊದಲಾದ ಅಪರೂಪದ ತಿನಿಸುಗಳವರೆಗೆ ಎಲ್ಲವನ್ನೂ ರುಚಿಕಟ್ಟಾಗಿ ತಯಾರಿಸುತ್ತಾರೆ. ಕೇವಲ ತಯಾರಿಕೆಯೊಂದೇ ಅಲ್ಲ, ಅವನ್ನು ಸುಂದರವಾಗಿ ವಿನ್ಯಾಸಗೊಳಿಸಿ ಪ್ರಸ್ತುತಪಡಿಸುವ ಕಲೆಯೂ ಅವರಿಗೆ ಕರಗತವಾಗಿದೆ. ಶಕ್ತಿಧಾಮದ ಹೆಣ್ಣುಮಕ್ಕಳ ಈ ಪಾಕ ಪ್ರಾವೀಣ್ಯ ಮತ್ತು ಅಭಿರುಚಿ ನೋಡುಗರನ್ನು ನಿಬ್ಬೆರಗಾಗಿಸುತ್ತದೆ. ಅವರು ಜಗತ್ತಿನ ವಿವಿಧೆಡೆಯ 250ಕ್ಕೂ ಹೆಚ್ಚು ಸಿಹಿತಿನಿಸುಗಳನ್ನು ತಯಾರಿಸುವ ಕೌಶಲ್ಯ ಹೊಂದಿದ್ದಾರೆ.

ನಮ್ಮ ಉದ್ದೇಶವನ್ನು ಬೆಂಬಲಿಸಿ