Skip to main content

ಪದಾಧಿಕಾರಿಗಾಳು

ಶ್ರೀಮತಿ ಗೀತಾ ಶಿವರಾಜ್ ಕುಮಾರ್ (ಅಧ್ಯಕ್ಷರು)

ಶ್ರೀಮತಿ ಗೀತಾ ಶಿವರಾಜ್ ಕುಮಾರ್, ಉದ್ಯಮಿಯಾಗಿ, ನಿರ್ಮಾಪಕಿಯಾಗಿ, ಮಾನವೀಯತೆಯ ಹರಿಕಾರರಾಗಿ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡವರು. ಜನಪ್ರಿಯ ನಟ ಶಿವರಾಜ್ ಕುಮಾರ್ ಇವರ ಪತಿ.

2017 ರಲ್ಲಿ ಶಕ್ತಿಧಾಮದ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಗೀತಾ ಶಿವರಾಜ್ ಕುಮಾರ್, ಈ ಕ್ಷಣದವರೆಗೂ ಸಂಸ್ಥೆಯ ಮಕ್ಕಳ ಪ್ರಗತಿಗಾಗಿ ಶ್ರಮಿಸುತ್ತ ಬಂದಿದ್ದಾರೆ. ಪಾಕ ಕಲೆಯಲ್ಲಿ ಇವರ ವಿಶೇಷ ಆಸಕ್ತಿ ಹಾಗೂ ಮಕ್ಕಳಿಗೆ ಅತ್ಯುತ್ತಮವಾದ್ದನ್ನು ಒದಗಿಸುವ ಕಾಳಜಿಗಳಿಂದಾಗಿ ಶಕ್ತಿಧಾಮ ಕಟ್ಟಡವು ಹೊಸ ಸ್ವರೂಪ ಪಡೆದು ನಿಂತಿದೆ. ಇವರು ಪ್ರತಿ ವರ್ಷ ಸಮ್ಮರ್ ಕ್ಯಾಂಪ್ ನಡೆಸುತ್ತಿದ್ದು, ಇದರಲ್ಲಿ ಕರ ಕುಶಲ ವಸ್ತುಗಳ ತಯಾರಿಕೆ, ದೇಸೀ ಆಟಗಳು, ಜನಪದ ಕಲೆ, ಅಡುಗೆಯೇ ಮೊದಲಾದ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ.

ಡಾ. ಶಿವರಾಜ್ ಕುಮಾರ್ (ಮುಖ್ಯ ಆಧಾರ ಸ್ತಂಭ)

ಡಾ.ಶಿವರಾಜ್ ಕುಮಾರ್ ಭಾರತೀಯ ಚಿತ್ರರಂಗದ ಪ್ರಮುಖ ಕಲಾವಿದರಲ್ಲಿ ಒಬ್ಬರು. ಕನ್ನಡಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ, ಗಾಯಕರಾಗಿ ತೊಡಗಿಕೊಂಡಿರುವ ಇವರು, ದೂರದರ್ಶನ ನಿರೂಪಣೆಯಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇವರು ಕನ್ನಡ ಸಿನಿಮಾ ಜಗತ್ತಿನ ದಂತಕಥೆ ಡಾ.ರಾಜ್ ಕುಮಾರ್ ಅವರ ಹಿರಿಯ ಮಗ. ಸದಾ ಚೈತನ್ಯದ ಚಿಲುಮೆಯಂತಿರುವ ಶಿವರಾಜ್ ಕುಮಾರ್ ತಮ್ಮ ಈ ಚೈತನ್ಯದ ಹರಿವನ್ನು ಶಕ್ತಿಧಾಮದ ಮಕ್ಕಳ ಕಡೆಗೂ ತಿರುಗಿಸಿದ್ದಾರೆ, ಮಕ್ಕಳಿಗಾಗಿ ಕ್ರೀಡಾಕೂಟಗಳ ಆಯೋಜನೆ ಮಾಡುವುದು, ಅವರನ್ನು ಆಟಕ್ಕೆ, ಕಲಿಕೆಗೆ, ವ್ಯಾಯಾಮಕ್ಕೆ ಪ್ರೋತ್ಸಾಹಿಸುವುದು ಅವರ ನೆಚ್ಚಿನ ಕೆಲಸಗಳು. ‘ಶಿವಣ್ಣ’ ಎಂದೇ ಜನಪ್ರಿಯರಾಗಿರುವ ಶಿವರಾಜ್ ಕುಮಾರ್, ಶಕ್ತಿಧಾಮದ ಮಕ್ಕಳ ಪಾಲಿಗೆ ನಿಜಾರ್ಥದಲ್ಲಿಯೂ ಅಣ್ಣನಂತೆಯೇ ಇದ್ದಾರೆ.

ಮಂಜುಳಾ ಮಿರ್ಲೆ (ನಿರ್ದೇಶಕಿ – ಶಕ್ತಿಧಾಮ ವಿದ್ಯಾಲಯ)

ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಮಂಜುಳಾ ಮಿರ್ಲೆಯವರು 30 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ದುಡಿದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಹಂತಕ್ಕೇರಿ ನಿವೃತ್ತರಾದವರು. ಪ್ರಸ್ತುತ ಇವರು ಶಕ್ತಿಧಾಮ ವಿದ್ಯಾಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹೆಣ್ಣುಮಕ್ಕಳ ಕನಸುಗಳಿಗೊಂದು ರೂಪ ಕೊಟ್ಟು ಮುನ್ನಡೆಸುವಲ್ಲಿ ನಿರತರಾಗಿದ್ದಾರೆ. ಶಿಕ್ಷಣದ ಹಕ್ಕು, ಬಾಲಕಿಯರ ಶಿಕ್ಷಣ ಮತ್ತು ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ಮತ್ತು ಸರ್ವಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ಯೋಜನೆಗಳೇ ಮೊದಲಾದ ಶಿಕ್ಷಣ ಕ್ಷೇತ್ರದ ವಿವಿಧ ಹಂತಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ ಅವರ ಅನುಭವವು ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಅಮೂಲ್ಯವೂ ಉಪಯುಕ್ತವೂ ಆಗಿದೆ.

ನಮ್ಮ ಟ್ರಸ್ಟೀಗಳು

ಶ್ರೀ ಕೆಂಪಯ್ಯ ಐಪಿಎಸ್ (ನಿವೃತ್ತ)

ಶ್ರೀ ಜಿ.ಎಸ್.ಜಯದೇವ್

ಶ್ರೀಮತಿ ಎಮ್.ಎನ್.ಸುಮನಾ

ಶ್ರೀ ಸದಾನಂದ

ಶ್ರೀ ಎಸ್.ಕೆ.ಭಗವಾನ್

ಶ್ರೀ ತರುಣ್

ಶ್ರೀ ದೇವನೂರು ಮಹಾದೇವ

ಡಾ.ಕಮಲಾ ರಾಮನ್

ಶ್ರೀಮತಿ ಕೋಮಲಾ ಪೋತರಾಜ್

ಶ್ರೀಮತಿ ಶಾರದಾ ಸಿ.ಎಲ್.ವಿ ಶಾಸ್ತ್ರಿ

ಡಾ.ಸಿ.ಜಿ. ಬೆಟಸೂರಮಠ್ (ಜೆ.ಎಸ್.ಎಸ್)

ಸಂಸ್ಥಾಪಕರ

ಬಗ್ಗೆ ತಿಳಿಯಿರಿ

ಮೂಲಸೌಕರ್ಯಗಳ

ಬಗ್ಗೆ ತಿಳಿಯಿರಿ

ನಮ್ಮ ಉದ್ದೇಶವನ್ನು ಬೆಂಬಲಿಸಿ