Skip to main content

ನಮ್ಮ ವಿನ್ಯಾಸ

ಆಡಳಿತ ಬ್ಲಾಕ್

ಶಕ್ತಿಧಾಮದ ಆಡಳಿತ ಬ್ಲಾಕ್ ನಲ್ಲಿ ಸಂಸ್ಥೆಗೆ ಸಂಬಂಧಪಟ್ಟ ಎಲ್ಲ ಕಾರ್ಯಗಳೂ ನಡೆಯುತ್ತವೆ.

ಕೌಶಲ್ಯ ಭವನ

ಶಕ್ತಿಧಾಮದ ಹೆಣ್ಣುಮಕ್ಕಳಿಗೆ ವಿವಿಧ ಬಗೆಯ ಕೌಶಲ್ಯ ತರಬೇತಿ ನೀಡಲೆಂದೇ ಇದನ್ನು ಸ್ಥಾಪಿಸಲಾಗಿದೆ. ಕಂಪ್ಯೂಟರ್ ತರಬೇತಿ ಘಟಕ, ಅಡುಗೆ ಘಟಕ, ಹೊಲಿಗೆ ಘಟಕ, ಆಹಾರ ಮತ್ತು ಜೇನುತುಪ್ಪ ಸಂಸ್ಕರಣಾ ಘಟಕಗಳೇ ಮೊದಲಾದ ವಿವಿಧ ತರಬೇತಿ ಘಟಕಗಳು ಇದರಲ್ಲಿ ಅಡಕವಾಗಿವೆ.

ವಸತಿ ಸೌಲಭ್ಯ

ಒಂದೇ ರೀತಿಯ ಎರಡು ವಸತಿನಿಲಯಗಳನ್ನು ಸ್ಥಾಪಿಸಲಾಗಿದ್ದು (ಶಾರದಾ ಕುಟೀರ ಮತ್ತು ನಿವೇದಿತಾ ಕುಟೀರ), ಎರಡರಲ್ಲೂ ನೂರು ಹೆಣ್ಣುಮಕ್ಕಳಿಗೆ ಸಾಕಾಗುವಷ್ಟು ಬಂಕರ್ ಹಾಸಿಗೆಗಳು ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇವಲ್ಲದೆ, ನಿರಾಶ್ರಿತ ಮಹಿಳೆಯರಿಗೆಂದೇ ವಿಶೇಷವಾಗಿ ನಿರ್ಮಿಸಲಾದ ಅಕ್ಕಮಹಾದೇವಿ ವಸತಿ ನಿಲಯವೂ ಶಕ್ತಿಧಾಮದ ಆವರಣದಲ್ಲಿದೆ.

ಭೋಜನ ಶಾಲೆ

ಒಂದು ಬಾರಿಗೆ ಸುಮಾರು 200 ಹೆಣ್ಣುಮಕ್ಕಳು ಕುಳಿತು ಊಟ ಮಾಡಬಹುದಾದಷ್ಟು ವಿಶಾಲ ಮತ್ತು ನಿರ್ಮಲವಾದ ಭೋಜನ ಶಾಲೆಯನ್ನು ನಿರ್ಮಿಸಲಾಗಿದೆ.

ಹೊಲಿಗೆ ತರಬೇತಿ ಕೇಂದ್ರ

ಈ ಘಟಕವು 50 ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಉಡುಪುಗಳ ತಯಾರಿಕೆಗೆ ಅವಕಾಶ ಕಲ್ಪಿಸುತ್ತದೆ.

ಕಂಪ್ಯೂಟರ್ ತರಬೇತಿ ಕೇಂದ್ರ

ಈ ಘಟಕವು ಒಮ್ಮೆಗೆ 26 ಹುಡುಗಿಯರಿಗೆ ತರಬೇತಿ ಪಡೆಯಲು ಅವಕಾಶ ಒದಗಿಸುತ್ತದೆ. ತರಬೇತಿ ಕೇಂದ್ರವು ಪ್ರತಿದಿನ ಎರಡು ಬ್ಯಾಚ್‌ಗಳನ್ನು ನಡೆಸುತ್ತದೆ.

ಅಡುಗೆ ತರಬೇತಿ ಕೇಂದ್ರ

ವಿಶ್ವ ದರ್ಜೆಯ ಬೇಕಿಂಗ್ ಘಟಕವು ವಿವಿಧ ಪಾಕಪದ್ಧತಿಗಳನ್ನು ಅನ್ವೇಷಿಸಲು ಮತ್ತು ಜಗತ್ತಿನೆಲ್ಲೆಡೆ ಬಳಕೆಯಲ್ಲಿರುವ ಆಹಾರ ತಯಾರಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇಲ್ಲಿ ಹೆಣ್ಣುಮಕ್ಕಳಿಗೆ 180ಕ್ಕೂ ಹೆಚ್ಚು ಸಿಹಿತಿಂಡಿಗಳನ್ನು ತಯಾರಿಸಲು ಹಾಗೂ 250 ಜನರಿಗೆ ಸಾಕಾಗುವಷ್ಟು ವಿಶೇಷ ಭೋಜನ ಕೂಟ ನಿರ್ವಹಿಸಲು ತರಬೇತಿ ನೀಡಲಾಗುತ್ತದೆ.

ನಮ್ಮ ಉದ್ದೇಶವನ್ನು ಬೆಂಬಲಿಸಿ