Skip to main content

ಶಕ್ತಿಧಾಮ ವಿದ್ಯಾಶಾಲೆ

ಶಕ್ತಿಧಾಮ ವಿದ್ಯಾಶಾಲೆಯು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಅನುಭವದ ಕಲಿಕೆಯ ತತ್ವಗಳ ಆಧಾರದ ಮೇಲೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮಂಡಳಿಯ ಸದಸ್ಯ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

2022ರ ಮೇ 16ರಂದು ಶಕ್ತಿಧಾಮದ ಗೌರವಾನ್ವಿತ ಅಧ್ಯಕ್ಷರಾದ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರು, ಶಾಲೆಯ ಮೊದಲ ಬೆಲ್ ಹೊಡೆಯುವ ಮೂಲಕ ಇದನ್ನು ಉದ್ಘಾಟಿಸಿದ್ದರು. ಶಕ್ತಿಧಾಮದ ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿ ಸೇರ್ಪಡೆಗೊಂಡ ಈ ಶಾಲೆ ತನ್ನದೇ ಪ್ರತ್ಯೇಕ ಸ್ವಂತ ಆವರಣ ಹೊಂದಿದ್ದು, ಹೆಣ್ಣು ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ.

ಈ ಶಾಲೆಯಲ್ಲಿ ಒಟ್ಟು 126 ವಿದ್ಯಾರ್ಥಿಗಳಿದ್ದು, ಅವರಲ್ಲಿ 81 ಹುಡುಗಿಯರು ಶಕ್ತಿಧಾಮದಲ್ಲಿ ಆಶ್ರಯ ಪಡೆದವರು. ಉಳಿದಂತೆ, ಸಮಾಜೋ-ಆರ್ಥಿಕವಾಗಿ ಹಿಂದುಳಿದ - ಶಕ್ತಿಧಾಮಕ್ಕೆ ಸಮೀಪವಿರುವ ಗೌರಿಶಂಕರ ನಗರ, ದತ್ತ ನಗರ, ಕೊಳಗೇರಿ ಕಾಲೊನಿ, ಕನಕ ಗಿರಿ ಮತ್ತು ಅಲೆಮಾರಿ ತಾಂಡಾಗಳ 45 ಹೆಣ್ಣುಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ನೀಡುವ ಅವಕಾಶವನ್ನು ಈ ಶಾಲೆ ಒದಗಿಸಿಕೊಟ್ಟಿದೆ. ಈ ಮಕ್ಕಳನ್ನು ಮನೆಬಾಗಿಲಿಗೆ ದಾಖಲಾತಿ ಅಭಿಯಾನದ ಮೂಲಕ ಶಾಲೆಗೆ ಸೇರಿಸಿಕೊಳ್ಳಲಾಗಿದ್ದು, ಇವರೆಲ್ಲರೂ ಹಗಲು ವೇಳೆಯಲ್ಲಿ ತಮ್ಮ ಕಲಿಕೆ ನಡೆಸುತ್ತಿದ್ದಾರೆ.

ಶಕ್ತಿಧಾಮ ಶಾಲೆಯ ಶಿಕ್ಷಕರ ಆಯ್ಕೆ ಅತ್ಯಂತ ನಿಖರವಾದ ಪ್ರಕ್ರಿಯೆಯ ಮೂಲಕ ನಡೆಯುತ್ತದೆ. ಪ್ರವೇಶ ಪರೀಕ್ಷೆ, ಲೈವ್ ಡೆಮೊ ತರಗತಿಗಳು ಮತ್ತು ಮಂಡಳಿಯಿಂದ ಸಂದರ್ಶನಗಳನ್ನು ನಡೆಸುವ ಮೂಲಕ, 11 ಶಿಕ್ಷಕರನ್ನು ಶಕ್ತಿಧಾಮ ವಿದ್ಯಾಶಾಲೆಯ ಕುಟುಂಬಕ್ಕೆ ಸೇರಿಸಿಕೊಳ್ಳಲಾಗಿದೆ. ಬೋಧನೆಯ ಜೊತೆಗೇ ಸಹಾನುಭೂತಿಯಿಂದ ಹೆಣ್ಣುಮಕ್ಕಳ ಭವಿಷ್ಯ ರೂಪಿಸುವ, ಅವರನ್ನು ಕಲಿಕೆಗೆ ಪ್ರೋತ್ಸಾಹಿಸುವ ಜವಾಬ್ದಾರಿಯೂ ಈ ಶಿಕ್ಷಕರ ಹೆಗಲ ಮೇಲಿದೆ. ಶಕ್ತಿಧಾಮ ವಿದ್ಯಾಶಾಲೆಯ ನಿರ್ದೇಶಕಿಯಾಗಿರುವ ಶ್ರೀಮತಿ ಮಂಜುಳಾ ಮಿರ್ಲೆ ಹಾಗೂ ಶಿಕ್ಷಣ ಸಮಾಲೋಚಕರಾದ ಶ್ರೀ ಕೆಂಡಗಣ್ಣ ಸ್ವಾಮಿಯವರ ನೇತೃತ್ವದಲ್ಲಿ ಶಿಕ್ಷಕರ ತಂಡವು ಎಲ್ಲ ಸವಾಲುಗಳನ್ನೂ ಮೀರಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ನಮ್ಮ ಉದ್ದೇಶವನ್ನು ಬೆಂಬಲಿಸಿ