Skip to main content

ನಮ್ಮ ಕಾರ್ಯಗಳು

ಹೆಣ್ಣುಮಕ್ಕಳ ಶಿಕ್ಷಣ

ಹಿಂದುಳಿದ ಹೆಣ್ಣುಮಕ್ಕಳಿಗೆ ಶಿಕ್ಷಣ ಪದೆಯಲು ಅವಕಾಶ ಕಲ್ಪಿಸುವುದು ಮತ್ತು ಹತ್ತನೇ ತರಗತಿಯವರೆಗೆ ಅವರನ್ನು ಓದಿಸುವುದು. ನಂತರ ಹುಡುಗಿಯರು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಮಾಡಿಕೊಂಡು ಶಿಕ್ಷಣ ಮುಂದುವರಿಸಲು ಸಹಕಾರ ನೀಡುವುದು.

ಮಹಿಳೆಯರ ಪುನರ್ವಸತಿ

ಅಗತ್ಯದಲ್ಲಿರುವ ಮಹಿಳೆಯರಿಗೆ ಅವರ ಜಾತಿ - ಮತ - ಧರ್ಮಗಳನ್ನು ಲೆಕ್ಕಿಸದೆ ಸೌಕರ್ಯ ಕಲ್ಪಿಸುವುದು ಮತ್ತು ಸಹಾಯ ಮಾಡುವುದು. ಆರ್ಥಿಕ ಸ್ವಾವಲಂಬನೆಯ ಮೂಲಕ ಅವರು ಸಮಾಜದಲ್ಲಿ ತಮ್ಮ ಘನತೆ ಮತ್ತು ಸಮಾನತೆಯನ್ನು ಮರಳಿ ಪಡೆಯಲು ಬೆಂಬಲ ನೀಡುವುದು.

ಸಹಾಯ ಹಸ್ತ

ವಸತಿ

ಅವಿವಾಹಿತ ತಾಯಂದಿರು, ಅತ್ಯಾಚಾರ ಸಂತ್ರಸ್ತರು ಅಥವಾ ಗರ್ಭಿಣಿಯರು ಶಕ್ತಿಧಾಮದ ಬಾಗಿಲು ಬಡಿದ ಕ್ಷಣದಿಂದಲೇ ನಮ್ಮ ಆಸರೆ ಪಡೆಯುತ್ತಾರೆ.

ಆಪ್ತ ಸಮಾಲೋಚನೆ

ಅಗತ್ಯದಲ್ಲಿರುವ ಮಹಿಳೆಯರಿಗೆ ಆದ್ಯತೆಯ ಮೇರೆಗೆ ಸೂಕ್ತ ಸಮಾಲೋಚನೆ ಹಾಗೂ ಬೆಂಬಲ ಒದಗಿಸಲಾಗುತ್ತದೆ.

ವೈದ್ಯಕೀಯ ಬೆಂಬಲ

ಪ್ರಸವದ ನಂತರ ಬಾಣಂತನ, ಶಿಶು ಆರೈಕೆ, ಮಗುವಿಗೆ 3ರಿಂದ 6 ವರ್ಷಗಳಾಗುವವರೆಗೂ ವಸತಿ ಸೌಕರ್ಯ ಒದಗಿಸುವ ಜೊತೆಗೆ, ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತದೆ.

ಶಿಕ್ಷಣ

ಹಿಂದುಳಿದ ಕುಟುಂಬಗಳಿಂದ ಬಂದ ಹೆಣ್ಣುಮಕ್ಕಳಿಗೆ ವಸತಿ ಶಿಕ್ಷಣದ ಅವಕಾಶ ಒದಗಿಸಲಾಗುತ್ತದೆ.

ಕಾನೂನು ಬೆಂಬಲ

ಅಗತ್ಯದಲ್ಲಿರುವ ಮಹಿಳೆಯರಿಗೆ ಕಾನೂನು ಬೆಂಬಲ ಒದಗಿಸುವ ಮೂಲಕ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ಸಹಾಯ ಮಾಡಲಾಗುತ್ತದೆ.

ಕೌಶಲ್ಯಾಭಿವೃದ್ಧಿ

ವಿವಿಧ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ಮಹಿಳೆಯರಿಗೆ ಅನುವು ಮಾಡಿಕೊಡಲಾಗುತ್ತದೆ.

ನಮ್ಮ ಉದ್ದೇಶವನ್ನು ಬೆಂಬಲಿಸಿ