© 2025 ಶಕ್ತಿಧಾಮ®
ನಮ್ಮ ಕುರಿತು
ಹಿನ್ನೆಲೆ ಮತ್ತು ಪರಿಚಯ
ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದ ಮತ್ತು ನಿರಾಶ್ರಿತ ಮಹಿಳೆಯರ ದುರವಸ್ಥೆಗೆ ಮರುಗಿದ ಕನ್ನಡ ನೆಲದ ದಂತಕಥೆ ಡಾ.ರಾಜ್ ಕುಮಾರ್ ಅವರು ತಮ್ಮ ಸ್ನೇಹಿತ, ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯನವರ ಜೊತೆಗೂಡಿ ಶಕ್ತಿಧಾಮವನ್ನು ಸ್ಥಾಪಿಸಿದರು. ಶೋಷಿತ ಮಹಿಳೆಯರಿಗಾಗಿ ಅಲ್ಪಾವಧಿ ವಸತಿ ಒದಗಿಸುವ ಉದ್ದೇಶದಿಂದ ಆರಂಭಗೊಂಡ ಈ ಆಶ್ರಯ ಸಂಸ್ಥೆ, ಇಂದು ಹೆಣ್ಣುಮಕ್ಕಳ ಬದುಕನ್ನು, ಕನಸುಗಳನ್ನೂ ಪೋಷಿಸುವ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಶಕ್ತಿಧಾಮ ಕಟ್ಟಡಕ್ಕೆ ಭೂಮಿ ನೀಡಿ ಸಹಕರಿಸಿದ ಜೆ ಎಸ್ ಎಸ್ ಮಹಾವಿದ್ಯಾಪೀಠದ ಸ್ಥಾಪಕಾಧ್ಯಕ್ಷರಾದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ.
ಶಕ್ತಿಧಾಮದ ನಿರ್ಮಾಣಕ್ಕೆ ಭೂಮಿಯನ್ನು ದಾನ ಮಾಡಿದ ಜೆಎಸ್ಎಸ್ ಮಹಾವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿ ಅವರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಧ್ಯೇಯೋದ್ದೇಶ
ಸಹಾಯದ ಅಗತ್ಯವಿರುವ ಯಾವುದೇ ಹೆಣ್ಣುಮಗುವಿನ ಶಿಕ್ಷಣಕ್ಕೆ ಅವಕಾಶ ಒದಗಿಸುವುದು, ಅವರನ್ನು ಹತ್ತನೇ ತರಗತಿಯವರೆಗೆ ಓದಿಸುವುದು, ಸಂಸ್ಥೆಯಲ್ಲಿರುವ ಹೆಣ್ಣುಮಕ್ಕಳ ಕಲಿಕೆ ಮತ್ತು ಪ್ರಗತಿಯನ್ನು ಖಾತ್ರಿಪಡಿಸುವುದು; ಹಾಗೂ ಒಂದಿಡೀ ಪೀಳಿಗೆಗೆ ಅದರ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಲು ಪ್ರೋತ್ಸಾಹಿಸುವುದು.
ಕಾರ್ಯವ್ಯಾಪ್ತಿ
ಶಕ್ತಿಧಾಮವು 9ರಿಂದ 16 ರವರೆಗಿನ ಅನಾಥ, ಬುಡಕಟ್ಟು ಕುಟುಂಬಗಳ ಮತ್ತು ಹಿಂದುಳಿದ ವರ್ಗಗಳ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಪುನರ್ವಸತಿಗೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯು ಆರಂಭಗೊಂಡಿದ್ದು 2017 ರಲ್ಲಿ.